Search Literature Discussion FAQ's Authors Vachanas Other Writeups
Home Search Vachanakaras Vachanas Vachana Songs
 

ಯೋಜನೆಯನ್ನು ಕುರಿತು

 

'ಸಮಗ್ರ ವಚನಸಾಹಿತ್ಯ ಪ್ರಕಟನ ಯೋಜನೆ' ಕರ್ನಾಟಕ ಸರ್ಕಾರದ ಈವರೆಗಿನ ಸಾಹಿತ್ಯಕ ಸಾಧನೆಗಳಲ್ಲಿ ಒಂದು ಮಹತ್ವದ ದಾಖಲೆಯಾಗಿದೆ. ಇದು ಒಂದು ಸಾಹಿತ್ಯಕೃತಿಯ ಪ್ರಕಟನೆಯಲ್ಲ. ಒಂದು ಸಾಹಿತ್ಯ ಪ್ರಕಾರದ ಪ್ರಕಟನೆ.

 

    ತತ್ವಕ್ಕೆ ತತ್ವ, ಸಾಹಿತ್ಯಕ್ಕೆ ಸಾಹಿತ್ಯವಾಗಿರುವ 'ವಚನ ವಾಙ್ಮಯ' ಏಕಕಾಲಕ್ಕೆ ಆತ್ಮಕಲ್ಯಾಣವನ್ನೂ ಸಮಾಜ ಕಲ್ಯಾಣವನ್ನೂ ಪ್ರತಿಪಾದಿಸುವ ಮೂಲಕ ಜಾಗತಿಕ ಮಹತ್ವ ಗಳಿಸಿದೆ. ಈ ಮೌಲಿಕ ಸಾಹಿತ್ಯವನ್ನು ಸುಲಭ ಬೆಲೆಯಲ್ಲಿ ಜನತೆಗೆ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.

 

     ಇವತ್ತಿನ ಮಿತಿಗೆ ಸಿಗುವ ಬಸವಯುಗ ಮತ್ತು ಬಸವೋತ್ತರ ಯುಗಗಳ ಎಲ್ಲ ಶರಣರ ಎಲ್ಲ ವಚನಗಳನ್ನು ಸಂಗ್ರಹಿಸಿ, ಸಂಸ್ಕರಿಸಿ, ಪ್ರಕಟಿಸಿದ ಪ್ರಯತ್ನವಿದು. ಈ ಮೂಲಕ ಬಸವಯುಗದ ಹಲವು ಹೊಸ ವಚನಗಳು ಬೆಳಕಿಗೆ ಬರುವುದರೊಂದಿಗೆ, ಬಸವೋತ್ತರ ಯುಗದ ಸಮಗ್ರ ವಚನ ಸಂಪತ್ತು ಪ್ರಥಮಸಲ ಹೊರ ಬರುತ್ತಿರುವುದು ಈ ಯೋಜನೆಯ ವಿಶೇಷ ಸಾಧನೆಯಾಗಿದೆ.

 

 

ಅಂತರ ಜಾಲದಲ್ಲಿ ಸಮಗ್ರ ವಚನಸಾಹಿತ್ಯ

 

ವಿಶ್ವದ ಮೂಲೆ ಮೂಲೆಯಲ್ಲಿರುವ ಆಸಕ್ತರು, ಓದುಗರು ಸಮಗ್ರ ವಚನಸಾಹಿತ್ಯವನ್ನು ಅಂತರಜಾಲದ ಮೂಲಕ ಪಡೆಯಲು ಅನುಕೂಲವಾಗುವಂತೆ ಸಮಗ್ರ ವಚನಸಾಹಿತ್ಯವನ್ನು ಅಂತರಜಾಲಕ್ಕೆ ಅಳವಡಿಸಲಾಗಿದೆ.

 

ಪ್ರಮುಖ ಅಂಶಗಳು

    v     ವಚನಸಾಹಿತ್ಯವನ್ನು 15 ಸಂಪುಟಗಳಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವು 2001ನೇ ಸಾಲಿನಲ್ಲಿ ಹೊರತಂದಿರುತ್ತದೆ.

    v     ಇದರಲ್ಲಿ ಸುಮಾರು 249 ಜನ ವಚನಕಾರರ ಸುಮಾರು 21,674 ವಚನಗಳನ್ನು ಸಂಗ್ರಹಿಸಿ, ಪ್ರಕಟಿಸಲಾಗಿದೆ.

    v     ವಚನಗಳಿಂದ ಆಯ್ದ 1000 ವಚನಗಳನ್ನು ವಿವಿಧ ಸಂಗೀತ ನಿರ್ದೇಶಕರಿಂದ ವಿವಿಧ ಧಾಟಿಗಳಲ್ಲಿ ರಾಗ ಸಂಯೋಜಿಸಿ, ವಿವಿಧ ಗಾಯಕರಿಂದ ಹಾಡಿಸಿ, ಧ್ವನಿ ಮುದ್ರಿಸಿ, ಅಂತರಜಾಲಕ್ಕೆ ಅಳವಡಿಸಲಾಗಿದೆ.

    v     ಆಸಕ್ತ ವ್ಯಕ್ತಿ ತನಗೆ ಬೇಕಾದ ವಚನಕಾರರ ವಚನದ ಪಠ್ಯವನ್ನು ಅಂತರಜಾಲದಲ್ಲಿ ಆಯ್ದುಕೊಂಡು ಅದರ ಜೊತೆಗೆ ಸಂಗೀತವನ್ನು ಆಲಿಸಬಹುದಾಗಿದೆ.  ಹೀಗೆ ಪಠ್ಯವನ್ನು ಏಕಕಾಲದಲ್ಲಿ ನೋಡುವ ಹಾಗೂ ಸಂಗೀತವನ್ನು ಆಲಿಸುವ ವಿಶೇಷತೆ ಇದೆ.

    v     ಎಂ.ಎಸ್.ಐ.ಎಲ್. ಸಹಕಾರದೊಂದಿಗೆ ಸಮಗ್ರ ವಚನಸಾಹಿತ್ಯವನ್ನು ಅಂತರಜಾಲಕ್ಕೆ ಅಳವಡಿಸಲಾಗಿದೆ.

    v     ವಚನ ಸಾಹಿತ್ಯದ ವೆಬ್‍ಸೈಟ್ ವಿಳಾಸ www.kannadasiri.co.in

ಯೋಜನೆಯನ್ನು ಕುರಿತು

ಅನಾವರಣ

ಆಶಯ

ಸಾಧನೆ

ನಮ್ಮ ನುಡಿ

ಸಂಪಾದಕ ಮಂಡಳಿ

ಅಂತರಜಾಲ ತಾಣ ಕುರಿತು

ಸಂದೇಶ

ಹೊನ್ನುಡಿ

ಪ್ರಕಾಶಕರ ಮಾತು

ಕಠಿಣ ಶಬ್ದಗಳ ಅರ್ಥ

Copyright | Disclaimer | Privacy Policy | Contact us  

Powered by Bloom Consulting Services.